Wednesday, October 14, 2015

ಭಾಷೆ
೨೦೦೧ ಅಥವಾ ೨೦೦೨ ರ ಸುಮಾರು ನಾನು ಗದಗದ ತೋಂಟದಾರ್ಯ ಇಂಜನಿಯರಿಂಗ್ ಕಾಲೇಜಿನಲ್ಲಿದ್ದಾಗ, ವಬ್ಬ ವಿದ್ಯಾರ್ಥಿನಿ ನನ್ನೊಂದಿಗೆ ಮಾತನಾಡುವಾಗ ನನಗೆ ಎಕವಚನ್ದಲ್ಲಿ  ಮಾತನಾಡುತ್ತಿದ್ದಳು, ಅವಳು ರೀ ಹಾಕಲೆ ಇಲ್ಲ. ನನಗೆ ತುಂಬಾ ಕೋಪಬಂತು. ಆವಳ ಮೇಲೆ ರೇಗಾಡಿದೆ. ನಂತರ ತಿಳಿಯಿತು ಅವಳು ಮೂಲತಃ ಬೆಂಗಳೂರಿನಾವಳೆಂದು. ಅವರಲ್ಲಿ ರೀ ಹಾಕುವ ರೂಡಿ ಇರುವದಿಲ್ಲ ಅದರಲ್ಲಿ ಅವಳ ತಪ್ಪಿಲ್ಲವೆಂದು. ನನಗೂ ತುಂಬಾ ಬೇಜಾರಾಯಿತು ಅವಳ ಮೇಲೆ ನಾ ಕೋಪಮಾಡಿಕೊಂಡದ್ದಕ್ಕೆ.
೨೦೧೪ ರಲ್ಲಿ ವಬ್ಬ ವಿದ್ಯಾರ್ಥಿನಿ ಬಳ್ಳಾರಿಯಿಂದ ನಮ್ಮಲ್ಲಿ ಇಂಜನಿಯರಿಂಗ್ ಮುಗಿಸಿ ಇಳಕಲ್ಲಗೆ ಮಾಧುವೆಯಾಗಿ ಹೋದಳು, ಅವಳು ಹೇಳಿದ್ದು ಗಂಡನ ಮನೆಯ ಮಂದಿಯ ಭಾಷೆಬಹಳ ವರಟ ಅಂತ.  ಮಾತು ವರಟ ಇರುವದು ಆ ಕಡೆಯ ಜನರಲ್ಲಿ ಸಹಜ. ಆದರೆ ಮನಸ್ಸು ವರಟು ಇರಲಿಕ್ಕಿಲ್ಲ ತಿಳಿದು ನೋಡೆಂದೆ. ಎಷ್ಟೋಸಲ ಕೆಲವರ ಮಾತು ವರಟಾದರು ಮನಸ್ಸು ಮಾತ್ರ ಬಲು ಮ್ರುದು. ಕೆಲಜನರ ಮಾತು ಸಿಹಿಯಾದರೂ ಮನಸ್ಸಲ್ಲಿ ಕಹಿಯೇ ತುಂಬಿರುವ ಸಾಧ್ಯತೆ ಇರುತ್ತದೆ.  


Thursday, October 1, 2015

ಜೀವನದ ಅನುಬವ ದೊಡ್ಡದು.  

ಜನರಿಗೆ ಎಷ್ಟೇ ಸಹಾಯ ಮಾಡಿದರೂ ಅಷ್ಟೇ; ಅದು ಹೊಳೆಯಲ್ಲಿ ಹುಣಸೆ ತೊಳೆದಂತೆ. ನಾಚಿಗೆ ಇಲ್ಲದ ಜನುಮ ತಿದ್ದಿ ಕೊಳ್ಳದ ಬುದ್ದಿ; ಮತ್ತೆ ಮತ್ತೆ ಜನರ ನಂಬಿ ಮೋಸಹೋಗುತಿಹದು ನೋಡಾ ಈ ಮನಸ್ಸು/ಕಾಯ.