Friday, September 24, 2021

Best of luck to all the outgoing students of SDMCET

 ಜೀವನನೆ ಹೀಗೆ, ಕ್ಷಣ ಮಾತ್ರದಲ್ಲಿ, ಒಂದು ಪ್ರಸಂಗ ಅಥವಾ ವಿಷಯ ಅಥವಾ ವ್ಯಕ್ತಿಯಿಂದ, ಭಾವನಾ ಲೋಕಕ್ಕ ಹೋಗಿ ಎಲ್ಲಾ ಹಾಗೆ ಇದ್ದರೂ, ಎಲ್ಲ ಕಳಕೊಂಡೆ ಜೀವನ ಖಾಲಿ ಅಂತ ಅನಿಸುತ್ತೆ. ಮತ್ತೆ ಕೆಲವೊಮ್ಮೆ ಒಂದು ಪ್ರಸಂಗ ಅಥವಾ ವಿಷಯ ಅಥವಾ ವ್ಯಕ್ತಿಯಿಂದ, ಭಾವನಾ ಲೋಕಕ್ಕ ಹೋಗಿ ಎಲ್ಲಾ ಕಳಕೊಂಡಿದ್ದರೂ, ಜೀವನದಾಗ ಇದಕ್ಕಿಂತ ಹೆಚ್ಚೇನು ಬೇಕು ಅನಿಸಿ ಬಿಡತೈತಿ.

ಎಷ್ಟೋ ಸಲ, ಭಾವ ಜೀವಿಗೆ ಬದುಕು ಕಷ್ಟ ಆಗತೈತಿ. ಒಂದು ಉಧಾಹರಣೆ ತಗೋರಿ, ಮಕ್ಕಳ ಮನ್ಯಾಗಿದ್ದ ಸಾಲಿ ಕಲ್ಯಾಗ (ಮಾಸ್ತರ ಆಗಿದ್ದಕ್ಕ ಸಾಲಿ ಕಲಿಸುವಾಗ) ಅವರನ್ನ ಸಾಕಷ್ಟು ಬೈದಿರುತ್ತೇವೆ, ಅವರ ಮೇಲೆ ಕೋಪ ಮಾಡಿಕೊಂಡಿರುತ್ತೇವೆ. ಆದರ್ ಮಕ್ಕಳ ಕಲಿಯುವುದನು ಮುಗಿಸಿ ಮನಿ (ಸಾಲಿ) ಬಿಟ್ಟು ನೌಕರಿ ಮಾಡಾಕ ಹೋರಟಾಗ (ಮಗಳು ಮಧುವೆ ಆಗಿ ಗಂಡನ ಮನೆಗೆ ಹೋಗುವಾಗ) ಯಾಕೋ ಹೃದಯ ಭಾರ ಆಗಿಬಿಡತೈತಿ, ಕುತ್ತಿಗೆ ಬಿಗದಬಿಡತೈತಿ. ನಾವ ಬಯಸಿದ್ದ ಆಗಾ ಕತ್ತಿರತೈತಿ, ಅದು ತಲೆಗೆ ಗೊತ್ತಾಗತೈತಿ ಆದರ ಹೃದಯಕ್ಕ ಅರ್ಥ ಆಗೋದೇ ಇಲ್ಲ. ಕಣ್ಣು ತುಂಬಿದ್ದರೂ, ಮನಸ್ಸ ತುಂಬಾ, ಹೃದಯದ ತಂಬ ಅವರ ಇದ್ದರೂ, ಕುತ್ತಿಗೆ ಬಿಗಿದಿದ್ದರೂ ತೊರ್ಗೊಡಗದೆ ಅವರನ್ನ ಮನಸಾ ಹರಿಸಿ, ಕಳಿಸಿಕೊಡಬೇಕಾಗುತ್ತದ. ಮಕ್ಕಳಿಗೆ ಅವರ ಹೊಸ ಜೀವನ ಕಟ್ಟಿ ಕೊಳ್ಳುವ ಆಸೆ, ಸಾಕಷ್ಟು ಕನಸುಗಳು ಇರುತ್ತವೆ, ಆದರ ನಮಗ ಭಯ ಇರತೈತಿ, ಅವರನ್ನ ಬಿಟ್ಟು ಇರುವ ರೂಢಿ ಇರುದಿಲ್ಲ, ಮನಸ್ಸು ಮತ್ತು ಮನಿ ಖಾಲಿ ಅನ್ನಿಸುತ್ತಿರುತ್ತದ ಆದರೂ ಭಗವಂತನ ನೆನೆದು ಹರಸಿ, ಆಶಿರ್ವದಿಸಿ ಕಳಿಸಿಕೊಡಬೇಕಾಗುತ್ತದೆ. ಅದು ತಲೆಗೆ/ ಮನಸ್ಸಿಗೆ ಗೊತ್ತಾಗತೈತಿ ಆದರ ಹೃದಯಕ್ಕ ಅರ್ಥ ಆಗೋದೇ ಇಲ್ಲ.

ಎಷ್ಟೋ ಸಲ ಕೆಲವೊಬ್ಬರಿಗೆ ಭಾವದಿಂದ ಹೊರಗ ಬರಾಕ ಬಹಳ ಸಮಯ ಬೇಕಾಗತೈತಿ. ಜೀವನನ ಹಿಂಗ ಯಾವುದಕ್ಕೂ ಸಮಾಧಾನನ ಇರುವದಿಲ್ಲ ನೋಡ್ರಿ.